Saturday, January 16, 2010

ಹಣ ಮತ್ತು ಉಳಿತಾಯ.

ಈ ಸಮಯ investment ಮಾಡುವ ಸಮಯ.

ಹೌದು, ಮಾರ್ಚ್ ಹತ್ತಿರ ಬರುತಲಿದೆ. ಅಂದರೆ ನಮ್ಮ ನಮ್ಮ ಆದಾಯದ ಮೂಲವನ್ನು ಅದರ ಜೊತೆಗೆ ಆದಾಯಕ್ಕೆ ತಕ್ಕಂತೆ ತೆರಿಗೆಯನ್ನು ಕಟ್ಟುವ ಸಮಯ. ಅದರ ಜೊತೆಗೆ ತೆರಿಗೆಯನ್ನು ಹೇಗೆ ಅತಿ ಕಡಿಮೆ ಕಟ್ಟ ಬೇಕು ಎಂದು ಮಂಡೆ ಬಿಸಿ ಮಾಡುವ ಸಂದರ್ಭ ಕೂಡ. ಬಹಳಟ್ಟು ಜನ ತೆರಿಗೆ ಉಳಿಸುವ ಬರದಲ್ಲಿ ಎಲ್ಲೆಲ್ಲೋ investment ಮಾಡಿ, ತಮ್ಮ ಹಣವನ್ನು ಕಳೆದುಕೊಂಡ ಬಹಳಷ್ಟು ಉದಾಹರಣೆಗಳು ನಮ್ಮ ಮುಂದೆ ಇವೆ.


ಸ್ನೇಹಿತರೆ, ನೀವು investment ಮಾಡುವ ಮೊದಲು ಸ್ವಲ್ಪ್ಪ ನೀವು ಏನನ್ನು ಮಾಡಲು ಬಯಸುತ್ತಿದಿರಿ ಎನ್ನುವದನ್ನು ಮನದಟ್ಟು ಮಾಡಿಕೊಳ್ಳಿ. ನಿಮಗೆ short term returns ಬೇಕೋ ಅಥವಾ long term returns ಬೇಕೋ ಅನ್ನುವದನ್ನು ಚಿಂತಿಸಿ, ನಿಮ್ಮ ವಯಸ್ಸಿನ ಅನುಸಾರ, tax saving, ಹಣದ ಅವಶ್ಯಕತೆ ಅವಲಂಬಿಸಿ ನಿಮ್ಮ ಯೋಚನೆಗಳನ್ನು ಕಾರ್ಯರೂಪಕ್ಕೆ ತನ್ನಿ.

ಸದ್ಯದ ಪರಿಸ್ಥಿತಿತಿಯಲ್ಲಿ, mutual fund, equity market, gold, real estate, commodity market ಮೇಲೆ investment ಮಾಡುವದರಿಂದ ಹೆಚ್ಚಿನ ಗಳಿಕೆಯನ್ನು ಮಾಡಬಹುದು. ಆದರೆ ಮೊದಲೇ ಹೇಳಿದಂತೆ ಯಾವ ಪ್ಲಾನ್, ಯಾವ companyಗಳಲ್ಲಿ ಹಣ ಹೂಡಿಕೆ ಮಾಡಬೇಕು ಎನ್ನುವದನ್ನು ಸ್ವಲ್ಪ ಸಂಶೋದಿಸಿ, ಮುಂದಿನ ೪-೫ ವರುಷದ ಮಾರುಕಟ್ಟೆ ಹೇಗೆ ಇರಬಹುದು ಎನ್ನುವದನ್ನು ತಿಳಿದು ಕೊಂಡು ಹಣ ಹೂಡಿಕೆಯನ್ನು ಮಾಡಬಹುದು.

ಇದು ನಮ್ಮ ಹಣ. ಅದನ್ನ ಎಷ್ಟು ಸಮರ್ಪಕವಾಗಿ ಉಪಯೋಗಿಸಿ ಕೊಳ್ಳುತ್ತೇವೆ ಎನ್ನುವದು ನಮ್ಮ ಕೈ ಯಲ್ಲಿ ಇರುವಂತಹದ್ದು. ಆದರಿಂದ ಆದಷ್ಟು ಹಣವನ್ನು ಉಳಿಸಿ, ಬೇರೆ ಬೇರೆ ಉಳಿತಾಯದ ಯೋಜನೆಗಳಲ್ಲಿ ತೊಡಗಿಸಿ ಮುಂದಿನ ಭವಿಷ್ಯವನ್ನು ಇಂದೇ ನಿರ್ದರಿಸಿ.

Thursday, January 14, 2010

ನಾನು ಮತ್ತು ನನ್ನ ಡಾನ್ಸ್ ಪ್ರಾಕ್ಟೀಸ್!

ನಾವೇ ಹೀಗೆ. ಕೆಲವೊಂದು ವಿಚಾರಗಳು ಬೇಗ ತಲೆಗೆ ಹೋಗಿ ಬಿಡುತ್ತವೆ. ಕಲಿಯುವದು ಅಂದರೆ ಇದೆ ಅನಿಸುತ್ತೆ. ಇದು ನಮ್ಮ ಜೀವನದಲ್ಲೂ ಮತ್ತೊಮ್ಮೆ ಮೊನ್ನೆಮೊನ್ನೆ ಆಯಿತು.

ಜನವರಿ 29 ರಂದು ನಮ್ಮ ಕಂಪನಿಯ ಡೇ ಔಟ್ ಇದೆ. ಅದಕ್ಕೆ ಬಹಳಷ್ಟು ಜನರು ತಮ್ಮ ತಮ್ಮ ಕೌಶಲ್ಯವನ್ನು ತೋರಿಸಲು ಸಿದ್ದವಾಗಿದ್ದಾರೆ. ಅದಕ್ಕೆ ಬೇಕಾದಂತಹ "ಭಯಂಕರ" ತಯಾರಿಯನ್ನು ಕೂಡ ಶುರು ಮಾಡಿಕೊಂಡಿದ್ದಾರೆ. ಕೆಲವರು ಹಾಡಿದರೆ ಉಳಿದವರು ತಮ್ಮ ನೃತ್ಯ ಪ್ರದರ್ಶನ ನೀಡಲು ಸಿದ್ದವಾಗಿದ್ದಾರೆ.

ರಾಜೀವ ನನ್ನ ಆಪ್ತ ಗೆಳೆಯರಲ್ಲಿ ಒಬ್ಬ ಮತ್ತು ನನ್ನ ಸಹ ಕೆಲಸಗಾರ. ಈಗ ಡ್ಯಾನ್ಸ್ ಗೆ ಜೊತೆಜೊತೆಯಾಗಿ ಹೆಜ್ಜೆ ಹಾಕುವ ಜೊತೆಗಾರ. ಪ್ರೋಗ್ರಾಮ್ ಮಾಡುವವರು ಮಾಡುತ್ತಾರೆ ಎಂದು ಸುಮ್ಮನೆ ಇದ್ದ ನಮನ್ನು ಒತ್ತಾಯ ಮಾಡಿ, stageಗೆ ಕರೆತರುವ ಪ್ರಯತ್ನವನ್ನು ನಮ್ಮೆಲರ ನೃತ್ಯ ಗುರು ಪುನಿತಾ ಮಾಡುತ್ತಿದ್ದಾರೆ. ಪುನಿತಾ ಅವರು ಒಬ್ಬ ಉತ್ತಮ ನೃತ್ಯಗಾರ್ತಿ ಕೂಡ. ಅಲ್ಲದೆ ನೃತ್ಯ ಕ್ಲಾಸ್ ಕೂಡ ತೆಗೆದು ಕೊಳ್ಳುತಾರೆ. ಅವರ ಗರಡಿಯಲ್ಲಿ ನಾವು ಕಲಿಯುತಿರುವುದು ನಮ್ಮ ಪುಣ್ಯವೋ ಅಥವಾ ಅವರ ಪುಣ್ಯವೋ ನಾಕಾಣೆ (ಬಹುಶಹ: ಅವರ ಪುಣ್ಯವೇ ಇರಬೇಕು) .

ಮೊದಮೊದಲು ಸ್ವಲ್ಪ ಗಲಿಬಿಲಿ ಆದರು ಈಗ ಉತ್ತಮ ಲಯವನ್ನು ಕಂಡು ಕೊಂಡಿದೇವೆ. ಎಲ್ಲಿ ಹೋದರು danceನದೇ ಗುಂಗು. ದಿನಾ ಅರ್ದ ಘಂಟೆ ತಾಲೀಮು. ನಾವು ಬೇರೆಯವರಿಗಿಂತ ತುಂಬಾ ಉತ್ತಮವಾಗಿ ಮಾಡುತ್ತಿದ್ದೇವೆ ಹೇಳಲು ಮುಜುಗರವಾದರೂ ಹೇಳದೇ ಇದ್ದಾರೆ ತಪ್ಪಾದಿತು.

ಇರಲಿ, 29 ಸಮಿಪಿಸುತಿದೆ. ನಾವು ಕೂಡ ನಮ್ಮ ಪ್ರದರ್ಶನವನ್ನು ತೋರಿಸಲು ಕಾತರದಿಂದ ಕಾಯುತ್ತಿದ್ದೇವೆ.