Thursday, January 14, 2010

ನಾನು ಮತ್ತು ನನ್ನ ಡಾನ್ಸ್ ಪ್ರಾಕ್ಟೀಸ್!

ನಾವೇ ಹೀಗೆ. ಕೆಲವೊಂದು ವಿಚಾರಗಳು ಬೇಗ ತಲೆಗೆ ಹೋಗಿ ಬಿಡುತ್ತವೆ. ಕಲಿಯುವದು ಅಂದರೆ ಇದೆ ಅನಿಸುತ್ತೆ. ಇದು ನಮ್ಮ ಜೀವನದಲ್ಲೂ ಮತ್ತೊಮ್ಮೆ ಮೊನ್ನೆಮೊನ್ನೆ ಆಯಿತು.

ಜನವರಿ 29 ರಂದು ನಮ್ಮ ಕಂಪನಿಯ ಡೇ ಔಟ್ ಇದೆ. ಅದಕ್ಕೆ ಬಹಳಷ್ಟು ಜನರು ತಮ್ಮ ತಮ್ಮ ಕೌಶಲ್ಯವನ್ನು ತೋರಿಸಲು ಸಿದ್ದವಾಗಿದ್ದಾರೆ. ಅದಕ್ಕೆ ಬೇಕಾದಂತಹ "ಭಯಂಕರ" ತಯಾರಿಯನ್ನು ಕೂಡ ಶುರು ಮಾಡಿಕೊಂಡಿದ್ದಾರೆ. ಕೆಲವರು ಹಾಡಿದರೆ ಉಳಿದವರು ತಮ್ಮ ನೃತ್ಯ ಪ್ರದರ್ಶನ ನೀಡಲು ಸಿದ್ದವಾಗಿದ್ದಾರೆ.

ರಾಜೀವ ನನ್ನ ಆಪ್ತ ಗೆಳೆಯರಲ್ಲಿ ಒಬ್ಬ ಮತ್ತು ನನ್ನ ಸಹ ಕೆಲಸಗಾರ. ಈಗ ಡ್ಯಾನ್ಸ್ ಗೆ ಜೊತೆಜೊತೆಯಾಗಿ ಹೆಜ್ಜೆ ಹಾಕುವ ಜೊತೆಗಾರ. ಪ್ರೋಗ್ರಾಮ್ ಮಾಡುವವರು ಮಾಡುತ್ತಾರೆ ಎಂದು ಸುಮ್ಮನೆ ಇದ್ದ ನಮನ್ನು ಒತ್ತಾಯ ಮಾಡಿ, stageಗೆ ಕರೆತರುವ ಪ್ರಯತ್ನವನ್ನು ನಮ್ಮೆಲರ ನೃತ್ಯ ಗುರು ಪುನಿತಾ ಮಾಡುತ್ತಿದ್ದಾರೆ. ಪುನಿತಾ ಅವರು ಒಬ್ಬ ಉತ್ತಮ ನೃತ್ಯಗಾರ್ತಿ ಕೂಡ. ಅಲ್ಲದೆ ನೃತ್ಯ ಕ್ಲಾಸ್ ಕೂಡ ತೆಗೆದು ಕೊಳ್ಳುತಾರೆ. ಅವರ ಗರಡಿಯಲ್ಲಿ ನಾವು ಕಲಿಯುತಿರುವುದು ನಮ್ಮ ಪುಣ್ಯವೋ ಅಥವಾ ಅವರ ಪುಣ್ಯವೋ ನಾಕಾಣೆ (ಬಹುಶಹ: ಅವರ ಪುಣ್ಯವೇ ಇರಬೇಕು) .

ಮೊದಮೊದಲು ಸ್ವಲ್ಪ ಗಲಿಬಿಲಿ ಆದರು ಈಗ ಉತ್ತಮ ಲಯವನ್ನು ಕಂಡು ಕೊಂಡಿದೇವೆ. ಎಲ್ಲಿ ಹೋದರು danceನದೇ ಗುಂಗು. ದಿನಾ ಅರ್ದ ಘಂಟೆ ತಾಲೀಮು. ನಾವು ಬೇರೆಯವರಿಗಿಂತ ತುಂಬಾ ಉತ್ತಮವಾಗಿ ಮಾಡುತ್ತಿದ್ದೇವೆ ಹೇಳಲು ಮುಜುಗರವಾದರೂ ಹೇಳದೇ ಇದ್ದಾರೆ ತಪ್ಪಾದಿತು.

ಇರಲಿ, 29 ಸಮಿಪಿಸುತಿದೆ. ನಾವು ಕೂಡ ನಮ್ಮ ಪ್ರದರ್ಶನವನ್ನು ತೋರಿಸಲು ಕಾತರದಿಂದ ಕಾಯುತ್ತಿದ್ದೇವೆ.

5 comments:

NiTiN Muttige said...

ಹಂಗೆ ಬಾತ್ ರ್ಮ್ ಗೆ ಹೋದಾಗ ಡ್ಯಾನ್ಸ್ ಮಾಡಿ ಕಾಲು ಗಿಲು ಮುರ್ಕೊ ಬೇಡ ಗುರು!!:)

ಎಳ್ಳು ಬೆಲ್ಲ ತಿಂದು ಚೆನ್ನಾಗ್ ಡ್ಯಾನ್ಸ್ ಮಾಡಿ!!:)

NiTiN Muttige said...

ಹಂಗೆ ಬಾತ್ ರೂಮ್ ಗೆ ಹೋದಾಗ ಡ್ಯಾನ್ಸ್ ಮಾಡಿ ಕಾಲು ಗಿಲು ಮುರ್ಕೊ ಬೇಡ ಗುರು!!:)

ಎಳ್ಳು ಬೆಲ್ಲ ತಿಂದು ಚೆನ್ನಾಗ್ ಡ್ಯಾನ್ಸ್ ಮಾಡಿ!!:)

Anonymous said...

ನೀವು ಮತ್ತು Dance!!....ನಮಗೂ ನೋಡುವಾಸೆ!!

ಗುಹೆ said...

ಶುಭಾಶಯ.
Take care.. :P

ಡ್ಯಾನ್ಸ್ ಮಾಡಿ "ಪುನೀತ"ನಾಗು.

ಅಮೃತ said...

ibbruddu "Naakaane" punyane mostly